To fight in the 2018 Karnataka assembly elections, Karnataka chief minister Siddaramaiah seem to have hit upon a strategy centered around Kannada pride to take on BJP.
ಅನಿರೀಕ್ಷಿವಾಗಿ ಚುನಾವಣೆ ಸಮೀಪಿಸುತ್ತಿರುವಾಗಲೇ ಕನ್ನಡ ಧ್ವಜದ ಕೂಗನ್ನು ರಾಷ್ಟ್ರ ಮಟ್ಟಕ್ಕೆ ಮುಟ್ಟಿಸಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ. ಈ ಹಿನ್ನಲೆಯಲ್ಲಿ, ಜಾತಿ ಮತ್ತು ಹಣಬಲದಲ್ಲೇ ಮುಳುಗೇಳುವ ಚುನಾವಣೆಗಳ ಮಧ್ಯೆ ಕನ್ನಡ ಮತ್ತು ಕನ್ನಡಿಗರ ಭಾವನಾತ್ಮಕತೆಯನ್ನೇ ಸರಕು ಮಾಡಿಕೊಳ್ಳಲು ಹೊರಟಿದ್ದಾರಾ ಸಿದ್ದರಾಮಯ್ಯ ಎಂಬ ಅನುಮಾನಗಳೂ ಕಾಡುತ್ತಿವೆ.
ಕನ್ನಡ ಪ್ರೇಮ ಮತ್ತು ಕರ್ನಾಟಕದ ವಿಚಾರದಲ್ಲಿ ಪದೇ ಪದೇ ಬಿಜೆಪಿ ಜನರ ಆಕ್ರೋಶಕ್ಕೆ ಆಹಾರವಾಗುತ್ತಿರುವುದು ನೋಡಿದಾಗ ಕಾಂಗ್ರೆಸ್ ತಂತ್ರ ಯಶಸ್ವಿಯಾಗುತ್ತಿರುವುದರ ಮುನ್ಸೂಚನೆಗಳನ್ನು ಕಾಣಿಸುತ್ತಿವೆ; ಹೀಗಾಗಿ 'ಕನ್ನಡ ರಾಜಕಾರಣ'ವನ್ನು ಸಿದ್ದರಾಮಯ್ಯ ಗಟ್ಟಿಯಾಗಿ ಅಪ್ಪಿಕೊಂಡರೆ ಅಚ್ಚರಿಯಿಲ್ಲ.